ಎಲ್ಲರಲ್ಲಿಯೂ ಒಂದಲ್ಲ ಒಂದು ಅಪೇಕ್ಷಣೀಯ ವ್ಯಕ್ತಿತ್ವ ಲಕ್ಷಣಗಳಿರುತ್ತವೆ. ಈ ಗುಣಲಕ್ಷಣಗಳು, ಕೆಲವರಲ್ಲಿ ಎದ್ದುಕಾಣಿಸುವಂತಿದ್ದು ಇತರರನ್ನು ಆಕರ್ಷಿಸುವಂತಿರುತ್ತವೆ. ಇತರರು ಆತನನ್ನು ಅನುಸರಿಸಲು, ಆತನ ಆದೇಶಗಳನ್ನು ಪಾಲಿಸಲು ಮುಂದಾಗುತ್ತಾರೆ. ನಾಯಕ ಅಥವಾ ನಾಯಕತ್ವ ರೂಪುಗೊಳ್ಳುವುದು ಹೀಗೇ.
ಈ ಕೃತಿಯನ್ನು ರಚಿಸಿರುವ ಡಾ|| ಅ. ಶ್ರೀಧರ ಅವರು ವೃತ್ತಿಪರ ಮನೋವಿಜ್ಞಾನಿ ಹಾಗೂ ಸಂಶೋಧಕರು.