Product Description
ಜೋಸೆಫ್ ಲಿಸ್ಟರ್ ಕಾರ್ಬಾಲಿಕ್ ಆಮ್ಲವನ್ನು ಪ್ರಯೋಗಿಸುವುದರ ಮೂಲಕ ‘ಆಂಟಿಸೆಪ್ಟಿಕ್ ಯುಗ’ವನ್ನು ಆರಂಭಿಸುವುದರ ಹಿನ್ನೆಲೆಯಲ್ಲಿ ಮೂವರ ಕೊಡುಗೆಯಿದೆ. ಲೂಯಿ ಪಾಶ್ಚರ್ ಅಂಗ ಕೊಳೆಯಲು ಹಾಗೂ ವೈನ್ ಹುಳಿತುಹೋಗಲು ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಕಾರಣ; ಅವನ್ನು ಸೂಕ್ತ ರಾಸಾಯನಿಕ ದ್ರಾವಣಗಳಿಂದ ನಿಗ್ರಹಿಸಬಹುದು ಎಂದು ಹೇಳಿದ್ದನು. ಕಾರ್ಲಿಸೈಲ್ ಪಟ್ಟಣದ ಚರಂಡಿ ನೀರಿನ ದುರ್ವಾಸನೆಯನ್ನು ಕಡಿಮೆ ಮಾಡಿ ದನಕರುಗಳ ಅನಾರೋಗ್ಯ ಹಾಗೂ ಸಾವನ್ನು ತಡೆಗಟ್ಟಲು ಪುರಸಭೆಯವರು ಕಾರ್ಬಾಲಿಕ್ ಆಮ್ಲವನ್ನು ಪ್ರಯೋಗಿಸಿದ್ದರು. ಇಗ್ನಜ್ ಸೆಮ್ಮೆಲ್ವೀಸ್ ಹಾಗೂ ಆಲಿವರ್ ವೆಂಡೆಲ್ ಹೋಮ್ಸ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೊದಲು ಹಾಗೂ ನಂತರ ಕೇವಲ ಕೈಗಳನ್ನು ತೊಳೆದುಕೊಳ್ಳುವುದರ ಮೂಲಕ ರಕ್ತನಂಜನ್ನು ನಿವಾರಿಸಬಹುದೆಂದು ಪುರಾವೆ ಸಹಿತ ನಿರೂಪಿಸಿದ್ದರು. ಜೋಸೆಫ್ ಲಿಸ್ಟರ್ ಈ ಮೂರು ತತ್ವಗಳನ್ನು ಸಮನ್ವಯಗೊಳಿಸಿ ಜೇಮ್ಸ್ಗ್ರೀಲ್ಲೀಸ್ ಎಂಬ 11 ವರ್ಷದ ಹುಡುಗನ ಗಾಯವನ್ನು ಮೊದಲ ಬಾರಿಗೆ ಗುಣಪಡಿಸುತ್ತಾರೆ! ತನ್ಮೂಲಕ ಇಡೀ ಜಗತ್ತಿಗೆ ಪೂತಿನಾಶಕಗಳ ಮೂಲಕ ಸುರಕ್ಷಿತ ಶಸ್ತ್ರಚಿಕಿತ್ಸಾ ಯುಗವನ್ನು ಆರಂಭಿಸುತ್ತಾನೆ!