Quantity
Product Description
ಕೊಂಡದಕುಳಿ ಏನು? ಹೇಗೆ ? ಇದು ಮಾತ್ರ ನನ್ನಿಂದ ಉತ್ತರಿಸಲಾಗದ ಪ್ರಶ್ನೆ. ನಾನು ಹೇಗೆ? ಎಂಬುದನ್ನು ಬೇರೆಯವರು ವ್ಯಾಖ್ಯಾನಿಸಬೇಕೇ ವಿನಾ ನಾನೇ ಹೇಳಿಕೊಂಡರೆ ಅದಕ್ಕೆ ಅರ್ಥವಿಲ್ಲ. ನನ್ನ ಸ್ವಗತವನ್ನಾದರೂ ನಾನು ಹೇಳಿಕೊಳ್ಳುವುದಕ್ಕೆ ಸಾಧ್ಯವೇ? ಇದೊಂದು ಅಸಾಧ್ಯವಾದ ಕೆಲಸ. ಯಾರ ಬದುಕಿನಲ್ಲೇ ಆಗಲಿ ಅಂದುಕೊಂಡಿದ್ದೆಲ್ಲ ಆಗುವುದಕ್ಕೆ ಸಾಧ್ಯವಿಲ್ಲ? ಆಗಿದ್ದೆಲ್ಲ ಅಂದುಕೊಂಡಿದ್ದಲ್ಲ. ಬದುಕಿನ ತಿರುವುಗಳು ಅದಮ್ಯವಾದದ್ದು. ನನ್ನ ಜೀವನದ ಬಹುಮುಖ್ಯ ಅಂಶವೆಂದರೆ, ಹೀಗಾಗಲಿ ಎಂದು ಬಯಸಿ ನಾನು ಯಾವುದೇ ಕೆಲಸ ಮಾಡುವುದಿಲ್ಲ. ಬಯಕೆ ಇಲ್ಲವೆಂದಾದಾಗ ನಿರಾಶೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಪಾತ್ರವಾಗಲಿ, ಬದುಕಾಗಲಿ ನಾನು ಯಾವುದನ್ನು ಬಯಸಿ ಪಡೆದಿದ್ದಲ್ಲ, ಎಲ್ಲವೂ ಆಕಸ್ಮಿಕವಾಗಿ ಎದುರಾದದ್ದು. ಬದುಕಿನ ರಥ ಹೇಗೆ ಸಾಗುತ್ತದೆಯೋ ಹಾಗೆ ನಡೆಯಬೇಕು. ನಮ್ಮಿಚ್ಚೆ ಎಂಬುದಕ್ಕೆ ಬದುಕಿನಲ್ಲಿ ಅರ್ಥವೇ ಇಲ್ಲ. ಎಲ್ಲವೂ ದೈವ ಸಂಕಲ್ಪ ಎಂದು ನಾನು ಗಟ್ಟಿಯಾಗಿ ನಂಬಿದ್ದೇನೆ.
Binding
Soft Bound
Author
Raghavendra Bhat
Number of Pages
192
Publisher
Kondadakuli Balaga, Bangalore
Publication Year
2020
Height
2 CMS
Length
22 CMS
Weight
200 GMS
Width
14 CMS
Language
Kannada