Select Size
Quantity
Product Description
ಬಿಡಾರ - ಅಶೋಕ್ ಪವಾರ ಬರೆದ ಮರಾಠಿ ಆತ್ಮಕಥೆ. ಓದುಗನನ್ನು ಪುಟ ಪುಟಗಳಲ್ಲೂ ಕಸಿವಿಸಿಗೊಳಿಸುವ ಮತ್ತು ದಿಙ್ಮೂಢಗೊಳಿಸುವ 'ಬೇಲದಾರ' ಎಂಬ ಸಮುದಾಯದವರ ಚಿತ್ರ-ವಿಚಿತ್ರ ಜೀವನ ಇಲ್ಲಿದೆ.
ಪಶುಸದೃಶ ಜೀವನವನ್ನು ಸಾಗಿಸುವ ಜನರ ಅಗ್ನಿದಿವ್ಯವನ್ನು ಓದುವಾಗ ಯಾವುದೇ ಸದೃದಯ ವಾಚಕ ಕಂಗೆಟ್ಟು ಹೋಗುವ, ಗಲಿಬಿಲಿಗೊಂಡು ಕಕ್ಕಾವಿಕ್ಕಿಗೊಳ್ಳುವ ದಟ್ಟ ಅನುಭವ ಇಲ್ಲಿದೆ. ಸಾಹಿತ್ಯದಲ್ಲಿ ಮೊದಲಿಗೇ ಇಷ್ಟು ಭಯಾನಕ, ಭೀಷಣ ಮತ್ತು ಭಯವಹಾ ದುಃಖ ವ್ಯಕ್ತವಾಗಿರಬಹುದು.
'ಬಿಡಾರ' ದ ಓದು ಒಂದು ವಿಭಿನ್ನ ಅನಿಭವ ನೀಡುತ್ತದೆ; ಅಷ್ಟೇ ಅಂತರ್ಮುಖಗೊಳಿಸುತ್ತದೆ. ಮನುಷ್ಯನೊಳಗಿರುವ ಮಾನವೀಯತೆಯನ್ನು ಅತ್ಯಂತ ತೀವ್ರವಾಗಿ ಅರಿವಿಗೆ ತಂದು ಕೊಡುವಂಥದ್ದೂ ಆಗಿದೆ.
ವಿಷಮ ವ್ಯವಸ್ಥೆಯ ಅಮಾನುಷ ಕ್ರೌರ್ಯದ ಲಕ್ಷಣವೆಂದರೆ ಈ ಕಥನ. ಭಿಕ್ಷೆ ಮತ್ತು ಹಸಿವು,ಬಡತನ ಮತ್ತು ಅಪರಾಧ -ಈ ಇಕ್ಕುಳದೊಳಗೆ ಸಿಕ್ಕು ಜರ್ಜರಿತಗೊಂಡ ಜ್ವಲಂತ ದುರಂತ ಗಾಥೆ.
Author
Chandrakanth Pokale
ISBN-13
9789392230622
Number of Pages
256
Binding
Soft Bound
Publisher
Ankitha Pusthaka
Publication Year
2023
Length
10 CMS
Height
1 CMS
Width
10 CMS
Weight
250 GMS
Language
Kannada