Quantity
Product Description
ಈ ಕಾದಂಬರಿ ನೆನಪುಗಳ ಒಂದು ಮಹಾಪ್ರವಾಹ. ಸಣ್ಣೀರನ ಕೊಪ್ಪಲಿನಂಥ ಒಂದು ಸಣ್ಣ ಹಳ್ಳಿಯಲ್ಲಿರುವ ಗುಂಡಪ್ಪ ಮೇಷ್ಟರು ಎಂಬ ಒಂದು ಪಾತ್ರ ತನ್ನ ತೀವ್ರ ಸಂವೇದನೆಯಿಂದ ಈ ಭೂಮಿಯ ಸ್ಥಿತಿ ಹೇಗಿದೆ, ಇದರ ವಿನಾಶಕ್ಕೆ ಮನುಷ್ಯನೆಷ್ಟು ಕಾರಣ ಎಂದೆಲ್ಲ ಧ್ಯಾನಿಸುವ ಕಥಾನಕ ಇಲ್ಲಿದೆ. ನೆಮ್ಮದಿಯನ್ನು ಅರಸಬೇಕಾದ ಮನುಷ್ಯ ಪರಮಸುಖ, ಅಂತಸ್ತು, ದುರಾಶೆ, ರಾಜಕೀಯ ಮೊದಲಾದವುಗಳನ್ನು ಬೆಂಬತ್ತಿ ತನ್ನ ನೆಲೆಯನ್ನು ತಾನೇ ಕಳೆದುಕೊಳ್ಳುವ ವಿಪರ್ಯಾಸ ಇಲ್ಲಿನ ಪುಟಪುಟಗಳಲ್ಲೂ ಪ್ರತಿಧ್ವನಿಸಿದೆ.
ಒಂದು ಪಾತ್ರದ ನೆನಪು ಮನುಷ್ಯನ ಭೂತಕಾಲ- ತನ್ನದಷ್ಟೇ ಅಲ್ಲ, ಇಡೀ ಭೂಮಂಡಲದ ಸ್ಮೃತಿಗಳನ್ನು ಕೂಡ ಎಷ್ಟು ನಿಚ್ಚಳವಾಗಿ ಪಡಿಮೂಡಿಸಬಹುದು ಎಂಬುದಕ್ಕೆ ಈ ಕಾದಂಬರಿಯ ವಿಶಿಷ್ಟ ನಿರೂಪಣೆ ಕನ್ನಡಿ ಹಿಡಿಯುವಂತಿದೆ. ಶಶಿಧರ ವಿಶ್ವಾಮಿತ್ರರ ನಿರೂಪಣಾ ವಿಧಾನ ಬಹುಮಟ್ಟಿಗೆ ಕುವೆಂಪು ಅವರ "ಕಾನೂರು ಹೆಗ್ಗಡಿತಿ' ಕಾದಂಬರಿಯನ್ನು ಹೋಲುವಂಥದು. ಆದರೆ ಭೌಗೋಳಿಕ, ನೈಸರ್ಗಿಕ ವಿವರಗಳನ್ನೂ ಒಂದು ಬಗೆಯ ಸ್ವಗತದ ರೀತಿಯಲ್ಲಿ ಸ್ಪರ್ಶಿಸುವ ವಿಧಾನ ಈ ಕಾದಂಬರಿಗಷ್ಟೇ ವಿಶಿಷ್ಟವಾದುದು. ಹಾಗೆ ನೋಡಿದರೆ ಇದು ಕಥಾಪಾತ್ರಗಳುಳ್ಳ ಒಂದು ವಿಶ್ವಕೋಶವೇ ಹೌದು. ಮನಸ್ಸನ್ನು ಮುಟ್ಟುವಂತೆ ನಮ್ಮ ಬೌದ್ಧಿಕತೆಯನ್ನೂ ಪ್ರಚೋದಿಸುವ ಇಂಥ ಕಾದಂಬರಿ ಕನ್ನಡದಲ್ಲಂತೂ ತೀರ ಅಪರೂಪ.
Binding
Soft Bound
Author
Shashidhara Vishwamithra
Number of Pages
225
Publication Year
2025
Publisher
Kadamba Prakashana
Height
2 CMS
Width
14 CMS
Weight
200 GMS
Language
Kannada